ಅಭಿಪ್ರಾಯ / ಸಲಹೆಗಳು

ಸಂಚಾರಿ ನಿಯಮಗಳು

ವಾಹನ ಚಾಲನೆ ಕಲಿಯುವುದು:

 

 1. ಯಾವೊಬ್ಬ ವ್ಯೆಕ್ತಿ ವಾಹನ ಚಾಲನೆ ಕಲಿಯುವಾಗ ಕಲಿಕ ರಹದಾರಿ ಪತ್ರ (ಲೈಸನ್ಸ್) ಪಡೆಯುವುದು ಅಗತ್ಯ.
 2. ಕಾನೂನಿನ ಪ್ರಕಾರ ವಾಹನದ ಮುಂದೆ ಮತ್ತು ಹಿಂದೆ ಚೌಕಕಾರದ 17*17 ಸಿ.ಮೀ. ಅಳತೆಯ ಬಿಳಿ ಫಲಕ ಅಥವಾ ಕಾಗದದ ರಟ್ಟನ್ನು ಕಾಣುವಂತೆ ಪ್ರದರ್ಶಿಸಬೇಕು. ಈ ಫಲಕದ ಮೇಲೆ ಕೆಂಪು ಬಣ್ಣದಿಂದ (L)ಇಂಗ್ಲೀಷ್ ಅಕ್ಷರ ಬರೆಯಬೇಕು, ಈ ಅಕ್ಷರದ ಉದ್ದ 4ಇಂಚು(10ಸಿ.ಮೀ) ಅಗಲ 5ಇಂಚು(8.5ಸಿ.ಮೀ) ಇರಬೇಕು.
 3. ವಾಹನ ಚಾಲನೆ ಮಾಡುವಾಗ ಕಲಿಕ ರಹದಾರಿ ಪತ್ರವನ್ನು ತಮ್ಮ ಬಳಿ ಇಟ್ಟುಕೊಂಡಿರಬೇಕು.
 4. ಈ ಕಲಿಕ ರಹದಾರಿ ಪತ್ರದ ಅವಧಿ 6 ತಿಂಗಳು ಹಾಗು ಇದಕ್ಕೆ ರಿಯಾಯಿತಿ ಅವಧಿ ಇರುವುದಿಲ್ಲ.
 5. ಕಲಿಕ ರಹದಾರಿ ಪತ್ರವು ಆಯಾ ನೀಡಿದ ರಾಜ್ಯಕ್ಕೆ ಮಾತ್ರ ಸೀಮಿತ.
 6. ಕನಿಷ್ಟ 18 ವರ್ಷ ವಯೋಮಾನದವರೆಗೆ ಕಲಿಕ ರಹದಾರಿ ಪತ್ರವನ್ನು ನೀಡಬಹುದು.

 

ಕಲಿಕ ರಹದಾರಿ ಪತ್ರ ಹೊಂದಿದ ಕಾರು ಚಾಲಕ:

ಕಾರು ಚಾಲಕ (ಕಲಿಕ ರಹದಾರಿ ಪತ್ರ ಹೊಂದಿದ) ತನ್ನ ಪಕ್ಕ ಕಾರು ಚಾಲನೆಯ ಅಧಿಕೃತ ರಹದಾರಿ ಹೊಂದಿದವರನ್ನು ಇರಿಸಿಕೊಳ್ಳಬೇಕು.  ಅವಶ್ಯವಿರುವಲ್ಲಿ ತಕ್ಷಣ ವಾಹನ ನಿಲ್ಲಿಸಲು ಸೂಕ್ತವಾದ ಸ್ಥಿತಿಯಲ್ಲಿ ಕುಳಿತಿರಬೇಕು.

 

ಖಾಯಂ ರಹದಾರಿ ಪತ್ರ ಹೊಂದಿದವರಿಗೆ:

 

 1. ಯಾವ ಬಗೆಯ ವಾಹನಕ್ಕೆ ಖಾಯಂ ರಹದಾರಿ ನೀಡಲಾಗಿದೆ, ಅದು ಅದಕ್ಕೆ ಮಾತ್ರ ಉರ್ಜಿತ.
 2. ವಾಯಿದೆ ಸಮಪ್ತಿಯಾದ ನಂತರ 30ದಿನಗಳ ರಿಯಾಯ್ತಿ ಅವಧಿಯೊಳಗೆ ನವೀಕರಿಸಿಕೊಳ್ಳಬೇಕು.
 3. ಖಾಯಂ ಚಾಲನ ರಹದಾರಿಗೆ ಅರ್ಜಿ ಸಲ್ಲಿಸಲು ಕನಿಷ್ಟ ವಯೋಮಾನ 18ವರ್ಷ, ಸಂದಾಯ ಸಹಿತ ಚಾಲಕರಿಗೆ 20ವರ್ಷ ವಯೋಮಾನ. ಸಂದಾಯ ಸಹಿತ ಚಾಲಕರು ವಾಹನ ಚಾಲನೆ ಮಾಡುವಾಗ ಯಾವಾಗಲೂ ತಮ್ಮ ಬಳಿ ಈ ಚಾಲನ ರಹದಾರಿ ಪತ್ರವನ್ನು ಇಟ್ಟುಕೊಂಡಿರಬೇಕು.

 

ಖಾಯಂ ರಹದಾರಿ ಪತ್ರ ಭಾರತದ್ಯಂತ ಸಿಧುಂತ್ವ ಪಡೆದಿದೆ.

 

ವಾಹನ ಚಾಲನೆಗೆ ಮೊದಲು ಕೆಳಗಿನವುಗಳನ್ನು ಖಚಿತಪಡಿಸಿಕೊಳ್ಳಿ:

 

 1. ನಿಮ್ಮ ವಾಹನ ನೊಂದಣೆಯಾಗಿದೆಯೇ?
 2. ನೋಂದಾಣಿ ಸಂಖ್ಯೆ ವಾಹನದ ಮುಂಭಾಗ ಮತ್ತು ಹಿಂಭಾಗದಲ್ಲಿ ತಿಳಿಸಿರುವಂತೆ ಪ್ರದರ್ಶಿಸಲಾಗಿದೆ.
 3. ಮೂರನೇ ವ್ಯೆಕ್ತಿಯಿಂದಾಗುವ ಹಾನಿಯ ಸ್ಥಿತಿಗೆ ವಿಮೆಯ ಜವಾಬ್ದಾರಿ/ಭದ್ಯತೆಯನ್ನು ಹೊಂದಿದೆ.
 4. ವಾಹನವು ರಸ್ತೆಯ ಸ್ಥಿತಿಗತಿಗೆ ಸೂಕ್ತವಾಗಿದೆ, ರಸ್ತೆಗೆ ಸೂಕ್ತವಲ್ಲದ ವಾಹನ ನಿಮ್ಮ ಹಾಗು ಇತರರ ಜೀವಕ್ಕೆ ಹಾನಿಕರ.
 5. ನೀವು ಮದ್ಯಪಾನ, ಡ್ರಗ್ಸ್, ವೇಸನಿಯಾಗಿರಬಾರದು, ಒಂದು ವೇಳೆ ಆಗಿದ್ದಲ್ಲಿ ನೀವು ವಾಹನವನ್ನು ಸರಿಯಾಗಿ ನಿಯಂತ್ರಣಗೊಳಿಸಲು ಸಾಧ್ಯವಾಗುವುದಿಲ್ಲ.
 6. ನೀವು ಚಾಲನೆ ಮಾಡುವಾಗ ವಾಹನಕ್ಕೆ ತಕ್ಕದಾದ ರಹದಾರಿ ಪತ್ರ ಪಡೆದಿರಬೇಕು.
 7. ನೀವು ಮಾನಸಿಕ ಹಾಗು ದೈಹಿಕವಾಗಿ ವಾಹನ ಚಾಲನೆ ಮಾಡಲು ಸದೃಢರಾಗಿರಬೇಕು.

 

ಕಾನೂನಿನ ಅಡಿಯಲ್ಲಿ ನಿಮ್ಮ ಕಾರು

 1. ನೊಂದಣಿಯಾಗಿರಬೇಕು.
 2. ಉತ್ತಮ ಸ್ಥಿಯಲ್ಲಿರುವ ಬ್ರೇಕ್ಗಳನ್ನು ಹೊಂದಿರಬೇಕು.
 3. ಸಂಖ್ಯಾ ಫಲಕ ಪ್ರದರ್ಶಿಸುವಂತಹ ಮುಂಭಾಗದ ಮತ್ತು ಹಿಂಭಾಗದ ದೀಪಗಳನ್ನು ಹೊಂದಿರಬೇಕು. ವಾಹನದ ದೀಪಗಳ ಕಾಲವಧಿ ಸೂರ್ಯಸ್ಥವಾದ ಅರ್ಧಗಂಟೆಗೆ ಪ್ರರಾಂಭವಾಗಿ ಸೂರ್ಯೋದಯವಾಗುವ ಅರ್ಧಗಂಟೆ ಮೊದಲು ಮುಂದುವರೆಯುತ್ತದೆ.
 4. ಟೈರ್ಗಳು ಅಗತ್ಯವಿರುವಷ್ಟು ಗಾಳಿಯನ್ನು ಹೊಂದಿ ಉತ್ತಮ ಸ್ಥಿತಿಯಲ್ಲಿರಬೇಕು.
 5. ಹಾರ್ನ್ ಸುಸ್ಥಿತಿಯಲ್ಲಿರಬೇಕು.
 6. ಸ್ಟೇರಿಂಗ್ನ ತಾಂತ್ರಿಕತೆ ಉತ್ತಮ ನಿರ್ವಹಣೆಯನ್ನು ಹೊಂದಿ ಸೂಕ್ತವಾದ ಆಕಾರವನ್ನು ಹೊಂದಿರಬೇಕು. ಮತ್ತು ವಿದ್ಯುತ್ ಅಥವಾ ತಾಂತ್ರಿಕತೆಯ ರಚನೆ ಹೊಂದಿರಬೇಕು.

 

ಸಂಚಾರಿ ಪೊಲೀಸರು ನಿಮ್ಮನ್ನು ನಿಲ್ಲಿಸಿದ್ದಲ್ಲಿ?

 1. ಸಮವಸ್ತ್ರದಲ್ಲಿರುವ ಸಂಚಾರಿ ಪೊಲೀಸರು ನಿಮ್ಮ ವಾಹನ ರಹದಾರಿ ಪತ್ರ ಮತ್ತು ವಾಹನ ದಾಖಲಾತಿಗಳನ್ನು ಕೇಳಿ ಪಡೆದು ಪರಿಶೀಲಿಸಲು ಹಕ್ಕು ಹೊಂದಿರುತ್ತಾರೆ.  
 2. ಅವಶ್ಯವೆನಿಸಿದ್ದಲ್ಲಿ ವಾಹನ ರಹದಾರಿ ಪತ್ರವನ್ನು ವಶಪಡಿಸಿಕೊಳ್ಳಲು ತೀರ್ಮಾನಿಸಬಹುದು.  
 3. ಸಂಚಾರಿ ಪೊಲೀಸರು ರಸ್ತೆಯಲ್ಲಿ ನಿಮಗೆ ಸೂಚನೆ ನೀಡಿದಾಗ ವಿದ್ಯುತ್ ಚಾಲಿತ ಸಂಚಾರಿ ದೀಪಗಳು ಏನೇ ಸೂಚಿಸುತ್ತಿದ್ದರೂ ಪೊಲೀಸರು ನೀಡಿದ ಸೂಚನೆಯನ್ನು ಪಾಲಿಸುವುದು ನಿಮ್ಮ ಕರ್ತವ್ಯ.  
 4. ರಸ್ತೆದಾಟುವಲ್ಲಿ/ಸೂಚನ ದೀಪಗಳು ಇರುವ ಸ್ಥಳದಲ್ಲಿ ಪೊಲೀಸ್ ಅಧಿಕಾರಿಗಳು ತೆಗೆದುಕೊಂಡ ನಿರ್ಣಯವೇ ಅಂತಿಮ.  
 5. ನಿಮ್ಮ ವಾಹನ ಕಾಣದಿದ್ದಲ್ಲಿ/ಸಿಗದೇ ಇದ್ದ ಪಕ್ಷದಲ್ಲಿ ಕಳ್ಳತನವಾಗಿರುವುದರ ಬದಲು ಆ ವ್ಯಾಪ್ತಿಯ ಸಂಚಾರಿ ಪೊಲೀಸ್ ಠಾಣೆಗಳ ಸುಪರ್ದಿಯಲ್ಲಿರ ಬಹುದು.
 6. ಸುತ್ತಮುತ್ತಲು ಅಥವಾ ಸ್ಥಳೀಯ ಅಂಗಡಿಗಳಲ್ಲಿ ಸಾಮಾನ್ಯವಾಗಿ ತೆಗೆದುಕೊಂಡು ಹೋಗಿರುವ ಸ್ಥಳೀಯ ಪೊಲೀಸ್ ಠಾಣೆ ವಿವರವನ್ನು ನೀಡುತ್ತಾರೆ.

 

ಪೊಲೀಸರು ತೆಗೆದುಕೊಳ್ಳಬಹುದಾದ ಕ್ರಮ:

ಅವರು ನಿಮ್ಮ ರಹದಾರಿ ಪತ್ರದ ವಿವರವನ್ನು ಟಿಪ್ಪಣಿ ಮಾಡಿಕೊಳ್ಳಬಹುದು, ನಂತರ ಇದನ್ನು ಅವರು ನ್ಯಾಯಾಲಯಕ್ಕೆ ಹಾಜರುಪಡಿಸಬಹದು.ನ್ಯಾಯಾಲಯಕ್ಕೆ ಹಾಜರುಪಡಿಸಿದಲ್ಲಿ, ನ್ಯಾಯಾಲಯ ಏನು ಕ್ರಮ ಕೈಗೊಳ್ಳಬೇಕೆಂದು ಅದೇಶಿಸಿಸುವುದು. ದಂಡವಾಗಿ  ಮೊತ್ತವನ್ನು ಕಟ್ಟುವುದು ನೀವು ತಪ್ಪಿತಸ್ತರೆಂದು ಹಣ ಸಂದಾಯ ಮಾಡಿದಲ್ಲಿ ಮೊಕದ್ದಮೆ ದಾಖಲಾಹುವುದು. ಇಲ್ಲದಿದ್ದಲ್ಲಿ ನೋಟೀಸ್ ನ್ನು ಕಳಿಸಲಾಗುವುದು ಹಾಗೂ ಅರ್ಹತೆಯ  ಅಂಶಗಳ ಮೇರೆಗೆ ಮೊಕದ್ದಮೆಯನ್ನು ನಿರ್ಣಯಿಸಲಾಗುವುದು, ರಹದಾರಿ  ಪತ್ರವನ್ನು ತಮ್ಮ ಬಳಿ ಇರಿಸಿಕೊಂಡು ತಾತ್ಕಾಲಿಕ ರಹದಾರಿಯನ್ನು ನೀಡಬಹುದು (ನಿಗದಿತ ಕಾಲಾವಧಿಯವರೆಗೆ), ವಶಪಡಿಸಿಕೊಂಡ ವ್ಯಾಪ್ತಿಯಲ್ಲಿ ಬರುವ ಪೊಲೀಸ್ ಠಾಣೆಯಲ್ಲಿ ದಂಡವನ್ನು ಕಟ್ಟಬಹುದು. ತಪ್ಪಿದ್ದಲ್ಲಿ ನ್ಯಾಯಾಲಯ  ನೋಟೀಸನ್ನು ಜಾರಿಪಡಿಸಲಾಗುವುದು.ಸಬ್ಇನ್ಸ್ಪೆಕ್ಟರ್ ಅಥವಾ ಅವರಿಗಿಂತ ಉನ್ನತ ದರ್ಜೆಯ ಪೊಲೀಸ್ ಅಧಿಕಾರಿ ಆಗಿದ್ದಲ್ಲಿ ವಿಧಿಸಿದ ದಂಡವನ್ನು ಸ್ಥಳದಲ್ಲಿಯೇ ಸಂದಾಯ ಮಾಡಬೇಕು. ಇದಕ್ಕೆ ಅಲ್ಲಿಯೇ ರಸೀದಿಗಳನ್ನು ನೀಡುವರು.

 

ಕೆಲವು  ಮುಖ್ಯವಾದ ಅಪರಾಧಗಳು:

 1. ವಾಹನ ಚಲಿಸುವಾಗ ಊರ್ಜಿತ ರಹದಾರಿ ಪತ್ರ ತಮ್ಮ ಬಳಿ ಇರಿಸಿಕೊಳ್ಳದಿರುವಿಕೆ/ರಹದಾರಿ ಪತ್ರ ಹೊಂದರಿರುವಿಕೆ.
 2. ರಹದಾರಿ ಪತ್ರ ವಿಲ್ಲದವರಿಗೆ ವಾಹನ ಚಲಿಸಲು ನೀಡುವುದು.
 3. ವಿಮೆ, ಅನುಮತಿ, ಸಮರ್ಥತೆ ಇಲ್ಲದ ಚಾಲನೆ
 4. ವೇಗ ಮತ್ತು ಅಜಾಗರೂಕತೆ ಚಾಲನೆ
 5. ಮಧ್ಯಪಾನ ಸೇವನೆ ಚಾಲನೆ
 6. ಪಟ್ಟಿ ದಾಟುವಿಕೆ/ಅಪಾಯಕರ ಪಟ್ಟಿ ದಾಟುವಿಕೆ
 7. ಏಕ ಮಾರ್ಗದ ವಿರುದ್ದ ಚಾಲನೆ
 8. ಪಾದಚಾರಿ ದಾಟುವ ದಾರಿಯಲ್ಲಿ ನಿಲುಗಡೆ/ನಿಲುಗಡೆ ಪಟ್ಟಿ ದಾಟುವಿಕೆ
 9. ಅನುಚಿತ ತಲೆದೀಪಗಳ ಬಳಕೆ
 10. ವಾಣಿಜ್ಯ ಉಪಯೋಗಕ್ಕಾಗಿ ಖಾಸಗಿ ವಾಹನಗಳ ಬಳಕೆ
 11. ಅಪಾಯಕರ ರೀತಿಯಲ್ಲಿ ಸರಕು ಸಾಗಾಣೆಕೆ
 12. ಟ್ಯಾಕ್ಸಿ ಚಾಲಕರು ಬಾಡಿಗೆ ಬರಲು ನಿರಾಕರಿಸುವುದು/ಹೆಚ್ಚಿನ ದರ/ ಸಮವಸ್ತ್ರ ಧರಿಸುದಿರುವಿಕೆ ವಿಧಿಸುವುದು.
 13. ಸಂಚಾರಿ ದೀಪಗಳ ನೆಗೆತ/ಏಗರುವಿಕೆ.

 

ಇತ್ತೀಚಿನ ನವೀಕರಣ​ : 30-06-2021 07:08 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮೈಸೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080