ಅಭಿಪ್ರಾಯ / ಸಲಹೆಗಳು

ಎಫ್ ಎಕ್ಯೂ

ಪ್ರಥಮ ವರ್ತಮಾನ ವರದಿ ಎಂದರೇನು?                                   

ಒಂದು ಸಂಜ್ಞೇಯ ಅಪರಾಧವು ನಡೆದ ಬಗ್ಗೆ ಪೊಲೀಸ್ ಠಾಣೆಯಲ್ಲಿ ಸ್ವೀಕರಿಸುವ ಪ್ರಥಮ ವರದಿಯನ್ನು ಪ್ರಥಮ ವರ್ತಮಾನ ವರದಿ ಎನ್ನುತ್ತಾರೆ. ಇದನ್ನು ಎಫ್.ಐ.ಆರ್. ಎಂದು ಹೇಳಲಾಗುತ್ತದೆ. ಇದು ಸಂಜ್ಞೇಯ ಅಪರಾಧದಮೊದಲ ಮಾಹಿತಿಯಾಗಿರುವುದರಿಂದ ಇದನ್ನು ಪ್ರಥಮ ವರ್ತಮಾನ ವರದಿ ಎಂದು ಕರೆಯುವರು. ಈ ಮಾಹಿತಿಯನ್ನು ಸ್ವೀಕರಿಸಿದ ನಂತರ ಪೊಲೀಸರು ಎಫ್.ಐ.ಆರ್.ದಾಖಲಿಸಿ ಅಪರಾಧದ ತನಿಖೆಯನ್ನುಪ್ರಾರಂಭಿಸುತ್ತಾರೆ.

ಅಸಂಜ್ಞೇಯ ಅಪರಾಧವನ್ನು ನಾನು ಹೇಗೆ ದಾಖಲಿಸಬೇಕು ?

ದಂಡ ಪ್ರಕ್ರಿಯಾ ಸಂಹಿತೆ ಪ್ರಕಾರ ಅಸಂಜ್ಞೇಯ ಅಪರಾಧಗಳನ್ನು ನ್ಯಾಯಾಲಯದ ನಿರ್ದೇಶನವಿಲ್ಲದೆ ಪ್ರಥಮ ವರ್ತಮಾನ ವರದಿ ದಾಖಲಿಸಿ, ತನಿಖೆ ಕೈಗೊಳ್ಳಲು ಸಾಧ್ಯವಿಲ್ಲದಿರುವುದರಿಂದ ಠಾಣೆಯ ಸಾಮಾನ್ಯ ದಿನಚರಿಯಲ್ಲಿ ಈ ದೂರನ್ನು ನಮೂದಿಸಿ ಫಿರ್ಯಾದುದಾರನಿಗೆ ಸಂಬಂಧಿತ ನ್ಯಾಯಾಲಯದಲ್ಲಿ ದೂರು ದಾಖಲಿಸುವಂತೆ ಸಲಹೆ ನೀಡಬೇಕು. ಠಾಣೆಯ ಸಾಮಾನ್ಯ ದಿನಚರಿಯಲ್ಲಿ ನಮೂದಿಸಿದ ಮಾಹಿತಿಯನ್ನು ಉಚಿತವಾಗಿ ಫಿರ್ಯಾದುದಾರನಿಗೆ ನೀಡಬಹುದು.

ಸಂಜ್ಞೇಯ ಅಪರಾಧ ಎಂದರೇನು?

ದಂಡ ಪ್ರಕ್ರಿಯಾ ಸಂಹಿತೆಯಲ್ಲಿ ಅಪರಾಧಗಳನ್ನು ಎರಡು ರೀತಿಯಲ್ಲಿ ವಿಂಗಡಿಸಿದ್ದು, ಸಂಜ್ಞೇಯ ಮತ್ತು ಅಸಂಜ್ಞೇಯ ಅಪರಾಧಗಳಾಗಿವೆ. ಕೇವಲ ಸಂಜ್ಞೇಯ ಅಪರಾಧಗಳಲ್ಲಿ ಮಾತ್ರ ಪೊಲೀಸರು ಪ್ರಥಮ ವರ್ತಮಾನ ವರದಿ ದಾಖಲಿಸಿ ತನಿಖೆ ನಡೆಸಲು ಅಧಿಕಾರ ಹೊಂದಿರುತ್ತಾರೆ. ಈ ಅಪರಾಧಗಳಲ್ಲಿ ಭಾಗಿಯಾಗಿರುವ ಆರೋಪಿಯನ್ನು ಪೊಲೀಸರು ನ್ಯಾಯಾಲಯದ ವಾರೆಂಟಿಲ್ಲದೇ ಬಂಧಿಸಬಹುದು.

ಅಸಂಜ್ಞೇಯ ಅಪರಾಧ ಎಂದರೇನು?

ಪೊಲೀಸರು ನ್ಯಾಯಾಲಯದ ಅನುಮತಿ ಇಲ್ಲದೆ ದಾಖಲು ಮಾಡುವುದಕ್ಕಾಗಲಿ, ತನಿಖೆ ಮಾಡುವುದಕ್ಕಾಗಲಿ ಅಥವಾಆರೋಪಿಯನ್ನು ದಸ್ತಗಿರಿ ಮಾಡುವುದಕ್ಕಾಗಲೀ ಸಾಧ್ಯವಿಲ್ಲದ ದಂಡ ಪ್ರಕ್ರಿಯಾ ಸಂಹಿತೆ ವರ್ಗದ ಅಪರಾಧಗಳನ್ನು ಅಸಂಜ್ಞೇಯ ಅಪರಾಧಗಳೆನ್ನುವರು. ಸಾಮಾನ್ಯವಾಗಿ ಈ ಅಪರಾಧಗಳು ಕ್ಷುಲ್ಲಕ/ಚಿಕ್ಕ ಅಪರಾಧಗಳಾಗಿರುತ್ತವೆ. ಉದಾ: ಒಬ್ಬರು ಮತ್ತೊಬ್ಬರನ್ನು ಬೆಯ್ಯುವುದು, ಗಾಯಗಳಾಗದಂತೆ ಹೊಡೆದಾಟ, ಭಯ ಹುಟ್ಟಿಸುವುದು ಇತ್ಯಾದಿ

ತುರ್ತು ಪರಿಸ್ಥಿತಿ ಸಂದರ್ಭಗಳಲ್ಲಿ ನಾನು ಮÁಡಬೇಕಾದುದು ಏನು ?

ಆ) ದೂರವಾಣಿ ಸಂಖ್ಯೆ 100 ಅಥವಾ 0821-2418612, 24444800, 2443535 ನ್ನು ಸಂಪರ್ಕಿಸಿ ಆ) ಹಿರಿಯ ಅದಿsಕಾರಿಗಳ, ವಲಯದ ಪೆÇಲೀಸ್ ಉಪ ಆಯುಕ್ತರ ಮತ್ತು ಪೊಲೀಸ್ ಠಾಣೆಗಳ ಸಂಖ್ಯೆಗಳಿಗಾಗಿ ವೆಬ್ ಸೈಟ್‍ನ 'ನಮ್ಮನ್ನು ಸಂಪರ್ಕಿಸಿ' (ಛಿoಟಿಣಚಿಛಿಣ us) ಗುಂಡಿಯನ್ನು ಒತ್ತಿ.

. ನಾನು ದೂರನ್ನು ಹೇಗೆ ದಾಖಲಿಸಬೇಕು?

ನೀವು ಸಮೀಪದ ಪೊಲೀಸ್ ಠಾಣೆಗೆ ಹೋಗಿ ಠಾಣೆಯ ಸ್ಥಾನಿಕ ಅಧಿಕಾರಿಗೆ ( S.ಊ.ಔ.) ಲಿಖಿತ ಅಥವಾ ಬಾಯಿ ಮಾತಿನ ದೂರನ್ನು ಸಲ್ಲಿಸಿ. ನಿಮ್ಮ ಬಾಯಿ ಮಾತಿನ ದೂರನ್ನು ಬರಹಕ್ಕೆ ಪರಿವರ್ತಿಸಿದ ನಂತರ ಫಿಯರ್Áದುದಾರರಾದ ನೀವು ( ದೂರುಸಲ್ಲಿಸುವವ ) ಸಹಿ ಮÁಡಬೇಕು. ಆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿಘಟನೆ ನಡೆಯದಿದ್ದ ಪP್ಷÀದಲ್ಲಿ ದೂರನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗೆ ವರ್ಗಾುಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಮೇಲೆ ಹೇಳಿದ ರೀತಿಯಲ್ಲಿ ದೂರನ್ನು ದಾಖಲು ಮಾಡಲು ಏನಾದರೂ ತೊಂದರೆಯಾದಲ್ಲಿ ಪಿsಯರ್Áದುದಾರನು ಆ ವಲಯದ ಹಿರಿಯ ಪೊಲೀಸ್ ಅಧಿಕಾರಿಯನ್ನು ಸಂಪರ್ಕಿಸಬಹುದು.

ಒಂದು ಅಪರಾಧ ಅಥವಾ ಒಂದು ಅಪಘಾತದ ಸುದ್ದಿಯನ್ನು ತಲುಪಿಸಲು ನಾನು ಮÁಡಬೇಕಾದುದು ಏನು?

ಅ) ದೂರವಾಣಿ ಸಂಖ್ಯೆ 100 ಅಥವಾ 0821-2418612, 24444800, 2443535 ನ್ನು ಸಂಪರ್ಕಿಸಿ ಆ)ಸಮೀಪದ ಪೊಲೀಸ್ ಠಾಣೆಗೆ ಕರೆ ನೀಡಿ. ( ದೂರವಾಣಿ ಸಂಖ್ಯೆಯನ್ನು ಸಂಪರ್ಕ ಪುಟದಲ್ಲಿ ಕೊಟ್ಟಿದೆ) ಇ) ಸಂಪರ್ಕ ಪುಟದಲ್ಲಿರುವ ಯÁವುದೇ ಪೆÇಲೀಸ್ ಅದಿsಕಾರಿಯನ್ನು ಸಂಪರ್ಕಿಸಿ. ಈ) ಸಮೀಪದ ಪೊಲೀಸ್ ಠಾಣೆಗೆ ಹೋಗಿ ಸುದ್ದಿ ಮುಟ್ಟಿಸಿ

ಮೈಸೈರು ಜಿಲ್ಲಾ ಪೆÇಲೀಸರಿಗೆ ಸ್ವಯಂ ಸೇವೆ ಸಲ್ಲಿಸಲು ಇಚ್ಛಿಸುವ ನಾನು ಯÁರನ್ನು , ಹೇಗೆ ಸಂಪರ್ಕಿಸಬೇಕು?

ಅ) ನೀವು ಸ್ಥಾನಿಕ ಪೆÇಲೀಸ್Œ ಠಾಣೆಯ ನಾಗರಿಕರ ಸಮಿತಿಯ (ಅiಣizeಟಿ ಅommiಣಣee) ಸದಸ್ಯರಾಗಬಹುದು. ವಿವರಗಳಿಗೆ ದಯವಿಟ್ಟು ನಿಮ್ಮ ವಿಭಾಗದ ಪೆÇಲೀಸ್ ಠಾಣೆಯನ್ನು ಸಂಪರ್ಕಿಸಿ. ಆ) ನೆರೆಹೊರೆ ಕಾವಲು ಸಮಿತಿಯ ಸದಸ್ಯರಾಗಬಹುದು ( ವಿವರಗಳಿಗೆ ನಿಮ್ಮ ವಿಭಾಗದ ಪೊಲೀಸ್ ಠಾಣೆಯನ್ನುŒ ಸಂಪರ್ಕಿಸಿ. ಇ) ವಿಶೇಷ ಪೊಲೀಸ್ ಅದಿsಕಾರಿಯÁಗಿ ದಾಖಲಾಗಬಹುದು. ( Sಠಿeಛಿiಚಿಟ Poಟiಛಿe ಔಜಿಜಿiಛಿeಡಿ) ಈ)

ಒಂದು ಮಗುವು ಸಂಕಷ್ಟದಲ್ಲಿದ್ದಾಗ ನನ್ನ ಕರ್ತವ್ಯ ಏನು?

ಅ) ದೂರವಾಣಿ ಸಂಖ್ಯೆ 100 ಅಥವಾ 0821-2418612, 24444800, 2443535 ನ್ನು ಸಂಪರ್ಕಿಸಿ ಬ) ಮಕ್ಕಳ ಸಹಾಯವಾಣಿಗೆ ( ಅhiಟಜ ಊeಟಠಿಟiಟಿe) ಕರೆಮÁಡಿ, ನಂ. 1091 - (ಉಚಿತ ಕರೆ) ಕ) ಸಮೀಪದ ಪೊಲೀಸ್ ಠಾಣೆಗೆ ಹೋಗಿ ವಿಷಯವನ್ನು ತಿಳಿಸಿ.

ಸಂಕಷ್ಟದಲ್ಲಿರುವ ಮಹಿಳೆಗೆ ಹೇಗೆ ಸಹಾಯ ಮÁಡಬಹುದು ?

ಅ) ದೂರವಾಣಿ ಸಂಖ್ಯೆ 100 ಅಥವಾ 0821-2418612, 24444800, 2443535 ನ್ನು ಸಂಪರ್ಕಿಸಿ ಬ) ವನಿತಾ ಸಹಾಯವಾಣಿಗೆ ಕರೆ ಮÁಡಿ ( Womeಟಿ ಊeಟಠಿಟiಟಿe) ಸಂಖ್ಯೆ: 1098 - (ಉಚಿತ ಕರೆ) ಕ) ಹತ್ತಿರದ ಪೊಲೀಸ್ ಠಾಣೆಗೆ ವಿಷಯ ತಿಳಿಸಿ

ವಾಹನವು ಕಳೆದು ಹೋದ ಸಂಧರ್ಭದಲ್ಲಿ, ನಾನು ಮÁಡಬೇಕಾದುದೇನು?

ವಾಹನಕ್ಕೆ ಸಂಬಂದಿಸಿದ ಎಲ್ಲಾ ದಾಖಲೆ ಪತ್ರಗಳೊಂದಿಗೆ, ಹತ್ತಿರದಲ್ಲಿರುವ ಪೆÇಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿ ಆನಂತರ ಪೊಲೀಸ್ ಠಾಣೆಂುÉೂಂದಿಗೆ ಸಂಪರ್ಕದಲ್ಲಿರಿ .

ಇತ್ತೀಚಿನ ನವೀಕರಣ​ : 08-10-2020 12:45 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮೈಸೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080