ಅಭಿಪ್ರಾಯ / ಸಲಹೆಗಳು

ನಮ್ಮ ಪರಿಚಯ

ಮೈಸೂರು ಜಿಲ್ಲಾ ಪೊಲೀಸ್ ದಳವು ನೂತನವಾಗಿ ಅಭಿವೃದ್ಧಿಕರಿಸಿದ ಅಂತರ್ಜಾಲವನ್ನು ಪ್ರಾರಂಭಿಸಿದ್ದು, ಮೈಸೂರಿನ ಜನತೆಯ ಹಿತರಕ್ಷಣೆ ಹಾಗೂ ನಾಗರಿಕರ ಕುಂದುಕೊರತೆಗಳನ್ನು ಶೀಘ್ರವಾಗಿ ಪರಿಹರಿಸಲು ಆಧುನಿಕ ತಂತ್ರಜ್ಞಾನದ ಮೂಲಕ ಹೊಸ ಮುನ್ನುಡಿಯನ್ನು ಬರೆಯಲು ಸಜ್ಜಾಗಿದೆ. ಎಲ್ಲರ ಸಂರಕ್ಷಣೆ ಹಾಗೂ ಜನಸ್ನೇಹಿ ನಿಲುವಿನೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಪೊಲೀಸ್ ಸೇವೆಯನ್ನು, ವಿವಿಧ ಮಾಹಿತಿಗಳನ್ನು ಸೂಕ್ತವಾಗಿ ನಿರ್ವಹಿಸಿ ಸಂಯೋಜಿಸುವ ಮೂಲಕ ಮಹತ್ಕಾರ್ಯಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ.

 

17 ಲಕ್ಷಕ್ಕೂ ಮೀರಿದ ಮೈಸೂರು ಜಿಲ್ಲೆಯ ನಾಗರಿಕ ರಕ್ಷಣೆಯ ಜವಾಬ್ದಾದಾರಿಯನ್ನು ಹೊತ್ತಿರುವ ಮೈಸೂರು ನಗರ ಪೊಲೀಸ್ ಐತಿಹಾಸಿಕ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಪೊಲೀಸ್ ಇಲಾಖೆಯ ವಿವಿಧ ಶಾಖೆಗಳಾದ, ಜಿಲ್ಲಾ ಅಪರಾಧ ಶಾಖೆ ,, ಜಿಲ್ಲಾ ಅಪರಾಧ ದಾಖಲೆ ವಿಭಾಗ, ಜಿಲ್ಲಾ ಅಪರಾಧ ಪತ್ತೆ ವಿಭಾಗ, ಜಿಲ್ಲಾ ವಿಶೇಷ ವಿಭಾಗ, ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ , ಬೆರಳಚ್ಚು ವಿಭಾಗ, ಸಂಚಾರ ಪೊಲೀಸ್, ಜಿಲ್ಲಾ ಸಶಸ್ತ್ರ ಕಾವಲುಪಡೆ. ಎಲ್ಲಾ ಶಾಖೆಗಳು ಮೈಸೂರಿನ ಜನತೆಗೆ ತೃಪ್ತಿದಾಯಕ ಸೇವೆಯನ್ನು ಒದಗಿಸಲು ಹಗಲಿರುಳು ಶ್ರಮಿಸುತ್ತಿದೆ.

 

ಮೈಸೂರಿನ ಪೊಲೀಸ್ ಅಧಿಕಾರ ವ್ಯಾಪ್ತಿಯನ್ನು ಮುಖ್ಯವಾಗಿ ಮೂರು ಉಪವಿಭಾಗಗಳಾಗಿ ವಿಂಗಡಿಸಲಾಗಿದೆ. ಅದು 1) ಮೈಸೂರು ಗ್ರಾಮಾಂತರ 2) ಹುಣಸೂರು ಮತ್ತು3) ನಂಜನಗೂಡು ಪ್ರತಿಯೊಂದು ಉಪವಿಭಾಗವು ಪೊಲೀಸ್ ಅಧೀಕ್ಷಕರ ದರ್ಜೆಯ ಅಧಿಕಾರಿಗಳ ಆಡಳಿತಕ್ಕೆ ಒಳಪಟ್ಟಿರುತ್ತದೆ. ಉಪವಿಭಾಗಗಳನ್ನು ಮತ್ತೆ ಕೆಲವು ವೃತ್ತಗಳಾಗಿ ವಿಂಗಡಿಸಲ್ಪಟ್ಟಿದ್ದು, ಪೊಲೀಸ್ ಇನ್ಸ್ಪೆಕ್ಟರ್ ಅವರ ನಿಯಂತ್ರಣಕ್ಕೆ ಒಳಪಟ್ಟಿರುತ್ತದೆ. ನೂತನವಾಗಿ ಅಭಿವೃದ್ದಿಪಡಿಸಿರುವ ಅಂತರ್ಜಾಲವು ನಾಗರಿಕರಿಂದ ಸಲಹೆ, ಸೂಚನೆಗಳನ್ನು ಪಡೆಯುವ ಅವಕಾಶವನ್ನು ಕಲ್ಪಿಸಲಿದ್ದು, ನಾಗರಿಕರು ತಮ್ಮ ಅಮೂಲ್ಯ ವಿಚಾರಗಳನ್ನು ಅಂತರ್ಜಾಲದ ಮೂಲಕ ಪೊಲೀಸರೊಂದಿಗೆ ಹಂಚಿಕೊಳ್ಳುವ ಸದಾವಕಾಶವನ್ನು ಒದಗಿಸಿದೆ.

 

ಇತ್ತೀಚಿನ ನವೀಕರಣ​ : 01-07-2021 10:39 AM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮೈಸೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080